- ರಾಯನರಮನೆ ಮೌಕ್ತಿಕದ ಕಳಶಾಯತದ ಬೆಳಗಿನಲಿ ಪಾಂಡವರಾಯ ನೆಲೆವನೆಗಳನು ನಗುತಿದ್ದುದು ನವಾಯಿಯಲಿ – ಪದ್ಯ ೨
- ವನದಲಿ ತರಳೆಯರು ತುಂಬಿದರು ಮರಿದುಂಬಿಗಳ ಡೊಂಬಿನಲಿ – ಪದ್ಯ ೩
- ಕೊಡಹಿ ಮೊಲೆಗಳ ಮೇಲುದಿನ ನಿರಿಯ – ಪದ್ಯ ೪
- ಗಿಳಿಗೆ ಹಾರದ ಬಲೆಗಳನು ಹಾಯ್ಕಿದರು ಕೊಂಬಿನಲಿ – ಪದ್ಯ ೪
- ಅಂಗಪರಿಮಳಕೆ ಸಾರಿದರೆ ಮರಿದುಂಬಿಗಳ ಸುಖಪಾರಣೆಯ ಬೆಸಗೊಳುತ – ಪದ್ಯ ೫
- ವಧೂಜನದಂಗಗಂಧ ಪ್ರಾವರಣ ಹುತ ಚರು ಪುರೋಡಾಶಾವಳಿಯ ಸೌರಭವ ಮುಸುಕಿತು ವನದ ವಳಯದಲಿ – ಪದ್ಯ ೬
- ಹಾಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ – ಪದ್ಯ ೭
- ಮುನಿವಟು ನಿಕರ ಶಿರದಲಿ ಕುಣಿಸಿದರು ಕುಂಚಿತ ಕರಾಂಗುಲಿಯ – ಪದ್ಯ ೮
- ಬಾಯಲೆಂಜಲಗಿಡಿಯ ಬಗೆದರಲಾ – ಪದ್ಯ ೯
- ಒದೆದು ಪದದಲಿ ಕೆಂದಳಿರ ತೋರಿದೆವಶೋಕೆಗೆ – ಪದ್ಯ ೧೩
- ಮದ್ಯಗಂಡೂಷದಲಿ ಬಕುಳದ ಮರನ ಭುಲ್ಲವಿಸಿದೆವು – ಪದ್ಯ ೧೩
- ಔಡುಗಚ್ಚಿದನಂಘ್ರಿಯಲಿ ನೆಲಬೀಡ ಬಿಡಲೊದೆದನು ಕರಾಂಗುಲಿಗೂಡಿ ಮುರಿದೌಕಿದನು ಖತಿಯಲಿ ನಿಜ ಗದಾಯುಧವ – ಪದ್ಯ ೨೦
- ಸರಿದಿಳಿವ ನಿರಿಯೊಂದು ಕೈಯಲಿ ಸುರಿವರಳ ಮುಡಿಯೊಂದು ಕೈಯಲಿಭರದೆ ಗಮನ ಸ್ವೇದ ಜಲ ಮಘಮಘಿಸೆ ದೆಸೆದೆಸೆಗೆ – ಪದ್ಯ ೨೧
- ಬಲುಮೊಲೆಗಳಳ್ಳಿರಿಯಲೇಕಾವಳಿಗಳನು ಕೆಲಕೊತ್ತಿ ಮೇಲುದಕಳಚಿ ನಡುಗಿಸಿ ನಡುವನಂಜಿಸಿ ಜಘನ ಮಂಡಲವ –ಪದ್ಯ ೨೨
- ತಾರಕೆಗಳುಳಿದಂಬರದ ವಿಸ್ತಾರವೋ ಗತಹಂಸಕುಲ ಕಾಸಾರವೋ ನಿಸ್ಸಾರವೋ ನಿರ್ಮಳ ತಪೋವನವೋ – ಪದ್ಯ ೨೩
- ಅಲರ್ದ ಹೊಂದಾವರೆಯ ಹಂತಿಯೊ; ತಳಿತ ಮಾವಿನ ಬನವೊ; ಮಿಗೆ ಕತ್ತಲಿಪ ಬಹಳ ತಮಾಲ ಕಾನನವೋ; ಹೊಳೆವ ವಿದ್ರುಮವನವೊ; ಕುಸುಮೋಚ್ಚಳಿತ ಕೇತಕಿದಳವೊ; ರಂಭಾವಳಿಯೊ – ಪದ್ಯ ೨೪
- ವಾರಿಕೇಳಿಯ ಮರೆದು ಶೋಣಿತವಾರಿ ಕೇಳಿಗೆ ಬನ್ನಿ ನೀವೆನುತ – ಪದ್ಯ ೩೨
- ಕೌರವವೃಂದವನು ಕರೆದರು ವಿನೋದಕೆ ಬಂದಿರೈ ನಾರಾಚಸಲಿಲ ಕ್ರೀಡೆಯಿದೆಯೆನುತ – ಪದ್ಯ ೩೪
- ಔಕಿದರಂತಕನ ಪುರದೆಲ್ಲೆಯಲಿ – ಪದ್ಯ ೩೬
- ಪದಘಾತ ಧೂಳೀಪಟಲ ಪರಿಚುಂಬಿಸಿದುದಂಬರವ – ಪದ್ಯ ೪೧
- ವಿಗಡರೆಸುಗೆಯ ಭೂರಿ ಬಾಣದ ಹಿಂಡು ತರಿದವು ಹೊಗುವ ಗಂಡಿಗರ – ಪದ್ಯ ೪೨