ನುಡಿಮುತ್ತುಗಳು: ವಿರಾಟ ಪರ್ವ ೩ ಸಂಧಿ

  • ಗತಿ ಶೂನ್ಯರಿಗೆ ನೀನೇ ಗತಿಯಲಾ – ಪದ್ಯ ೪
  • ಸೇವೆಯಿದಕೇ ಕಷ್ಟವೆಂಬುದು ಕೋವಿದರ ಮತ – ಪದ್ಯ ೫
  • ಮುರಿವ ದೈತ್ಯನ ಕಾಹಕೊಟ್ಟನು ತರಣಿ ತರುಣಿಗೆ – ಪದ್ಯ ೬
  • ಅಂಗವಟ್ಟದ ಸೌರಭದ ಪರಿಮಳಕೆ ತುಂಬಿಯ ಸಾರಕಟ್ಟಿತು – ಪದ್ಯ ೭
  • ಹಾರ ನೂಪುರ ಝಣಝಣಿತ ಝೇಂಕಾರ ರವವದು ಮೊಳಗೆ ಭುವನ ಮಯೂರ ಕುಣಿದುದು ವರಕಟಾಕ್ಷದ ಮಿಂಚು ಥಳಥಳಿಸೆ – ಪದ್ಯ ೭
  • ಮನುಮಥನ ಮದದಾನೆ; ಕಂದರ್ಪನ ಮಹಾಮಂತ್ರಾಧಿದೇವತೆ; ಜನರು ಮರುಳಹ ಮದ್ದು; ಸಂಸೃತಿ ಸುಖದ ಸಾಕಾರ; ಮನಸಿಜನ ಮಸೆದಲಗು; ಜನಮೋಹನ ತಿಲಕ; ಲಾವಣ್ಯಸಾಗರ ಜನಿತ ಲಕ್ಷ್ಮಿ – ಪದ್ಯ ೮
  • ಕುಡಿತೆಗಂಗಳ ಚಪಳೆ; ಉಂಗುರ ವಿಡಿಯನಡುವಿನ ನೀರೆ; ಹಂಸೆಯ ನಡೆಯ, ನವಿಲಿನ ಮೌಳಿಕಾತಿ, ಪಯೋಜ ಪರಿಮಳದ ಕಡು ಚೆಲುವೆ – ಪದ್ಯ ೯
  • ಅರಿದು ನೆತ್ತರು ಗಾಣದಲಗಿದು, ನೆರೆ ಬಿಗಿಯೆ ಮೈಬಾಸುಳೇಳದ ಹುರಿ, ಬಲಿದ ನೇಣ್ಸೋಂಕಿದಡೆ ಹೊಗೆ ಮಸಗದೆದೆಗಿಚ್ಚು – ಪದ್ಯ ೧೦
  • ಭಾವಿಸಲು ಸುರಚಂದನಾದಿಗಳೀವಧುವಿಗೆಲ್ಲಿಂದ ಮೇಣಿನ್ನಾವುದತಿಶಯವುಂಟೆನುತ ಖಳರಾಯನಿದಿರೆದ್ದ – ಪದ್ಯ ೧೧
  • ಬಾಯಿ ಹುಳುವುದು ಬಯಲ ನುಡಿದೊಡೆ – ಪದ್ಯ ೧೩
  • ತರಳೆ ಹಾಯ್ದುಳು ಮೊಲೆಯ ಜಘನದ ಭರದಿ ಬಡನಡು ಮುರಿಯದಿಹುದೇವರ ಸಭಾಗ್ಯತೆಗೆನಲು ರಭಸದೊಳೋಡಿದಳು – ಪದ್ಯ ೧೪
  • ಬಿರುಗಾಳಿಯಲಿ ಸೈಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು – ಪದ್ಯ ೧೫
  • ಹಿರಿಯರು ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು – ಪದ್ಯ ೧೭
  • ನಾಲುವರ ನಡುವಣ ಹಾವು ಸಾಯದು – ಪದ್ಯ ೧೮
  • ತಿಳಿ ವಿದೇಶಿಗರಿಗೆ ವಿದೇಶಿಗರೊಲವು ಸಮನಿಸಬೇಕು – ಪದ್ಯ ೧೯
  • ಮನನೊಂದು ಮೋರೆಯ ಬಲಿದು ಖತಿಯಲಿ ಕಂದಿದನು ಮೈ ಮರೆದು ರೋಷದೊಳವುಡನೊಡೆಯೊತ್ತಿ – ಪದ್ಯ ೨೧
  • ಶೌರ್ಯಧರ್ಮದರೂಪು ನೆಲೆಯಾ ಕ್ಷಮೆ; ಪತಿವ್ರತೆಯರಿಗೆ ಗುರು ನೀನು – ಪದ್ಯ ೨೫
  • ನೀರು ಹೊರಗಿಕ್ಕುವುದು ಮೂರೇಬಾರಿ ಬಳಿಕದು ಪಾಪಿ ಝಾಡಿಸೆ ಸೈರಿಸದು – ಪದ್ಯ ೨೬
  • ಪೌರುಷದ ಬಗೆ ಬಂಜೆಯಾಯಿತು – ಪದ್ಯ ೨೬
  • ಕೊಂದು ಕೊಂಬೊಡೆ ಆತ್ಮಘಾತಕ – ಪದ್ಯ ೩೧
  • ಕಲಿಭೀಮನೇ ಮಿಡುಕುಳ್ಳಗಂಡನು ಹಾನಿ ಹರಿಬಕೆನಿಲ್ಲದಂಗೈಸುವನು ಕಡುಹೀಹಾಳಿಯುಳ್ಳವನು – ಪದ್ಯ ೩೪
  • ಕಂಗಳ ಬೆಳಗು ತಿಮಿರವ ಕೆಡಿಸೆ – ಪದ್ಯ ೩೫
  • ಮೆರೆವ ಮಾಂಸದ ರಾಶಿಗಳ ಹರದೆರಕೆಗಳ ಕಂಡಬಲೆ ಹೊಗಳಿದಳಡಬಳದ ಮನೆಯ – ಪದ್ಯ ೩೭
  • ಕುಠಾರನ ಯಮನ ಕಾಣಿಸಿ – ಪದ್ಯ ೪೪
  • ಕೆಲಬರು ಗಳಿಸಿದರೆ ಕೆಲರುಂಡು ಜಾರುವರು – ಪದ್ಯ ೪೫
  • ಗಂಡರೋ ನೀವ್ ಷಂಡರೋ ಹೇಳೆಂದಳಿಂದುಮುಖಿ – ಪದ್ಯ ೪೭
  • ಬಲ್ಲಿದರೆಂದು ಹೊಕ್ಕರೆ ಹೆಣ್ಣಕೊಂದಿರಿಯೆಂದಳಿಂದುಮುಖಿ – ಪದ್ಯ ೪೮
  • ಈ ನಪುಂಸಕರೊಡನೆ ಹುಟ್ಟಿದ ನಾನು ಮೂಗುಳ್ಳವನೆ – ಪದ್ಯ ೪೯
  • ಹೆಣ್ಣ ಹರಿಬಕ್ಕೋಸುಗವೆ ತಮ್ಮಣ್ಣನಾಜ್ಞೆಯ ಮೀರಿ ಕುಂತಿಯ ಚಿಣ್ಣ ಬದುಕಿದೆನೆಂದು ನುಡಿವರು ಕುಜನರಾದವರು – ಪದ್ಯ ೫೧
  • ಶೂಲ ಮರುಮೊನೆಗೊಂಡವೊಲು; ಸುಳಿವಾಳೆ ಝಳತಾಗಿದವೊಲ್ – ಪದ್ಯ ೫೪
  • ಕೆಂದಳದ ಸೆಕೆಯಲಿ ಕಪೋಲವು ಕಂದಿ ಕಸರಿಕೆಯಾಯ್ತು ನಿಡುಸುಯಿಲಿಂದ ಸೀಕರಿಯೋದವೇಕಾವಳಿಯ ಮುತ್ತುಗಳು – ಪದ್ಯ ೫೫
  • ವಿಗಡ ಬಿರುದನು ಬಿಸುಟು ಬಡಿಹೋರಿಗಳು – ಪದ್ಯ ೬೧
  • ಭಂಗಕೆ ಹೆಗಲಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ – ಪದ್ಯ ೬೧
  • ಪಾಪಿಗಳಿರಪಕೀರ್ತಿಗಳುಕಿರಲ, ಭೂಮೀಪಾಲವಂಶದೊಳುದಿಸಲೇತಕೆ ಕೂಳುಗೇಡಿಂಗೊಡಲ ಹೊರುವಿರಿ – ಪದ್ಯ ೬೨
  • ಪರಿಮಿತದಲಿರವಾಯ್ತು ನಿಮ್ಮೈವರಿಗೆ ಲೇಸಾಯ್ತಕಟ – ಪದ್ಯ ೬೩
  • ಕಾಮಿನಿಯ ಕೇಳಿಯಲಿ ನೆನೆವುದು ತಾಮಸದಿ ತಾ ಮೀರಿ ನುಡಿದುದ್ದಾಮತೆಯ ಸೈರಿಸುವುದು – ಪದ್ಯ ೬೫
  • ದಿಮ್ಮನೆ ವನಿತೆಯನು ತೆಗೆದಪ್ಪಿ ವರಲೋಚನ ಪಯೋಧಾರೆಗಳ ತೊಡೆದನು ಭೀಮ ಸೆರಗಿನಲಿ – ಪದ್ಯ ೬೬
  • ರೋಷದ ಘನತೆ ಹೆಚ್ಚಿತು ಹಿಂಡಿದನು ಹಗೆಗಳನು ಮನದೊಳಗೆ – ಪದ್ಯ ೬೬
  • ಸಿಂಹದ ಕೂಸು ನರಿ ಕೆನಕುವವೊಲೀ ಕುರುಕೀಚಕಾದಿಗಳು ಗಾಸಿಯಾದರು – ಪದ್ಯ ೭೦
  • ಹಿರಿದು ಮುನಿದಡೆ ಭೀಮ ಬಗೆವನೆ ನೀತಿಗೀತಿಗಳ – ಪದ್ಯ ೭೧
  • ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ – ಪದ್ಯ ೭೩
  • ಪುರುಷರಪುರುಷನಲ್ಲಾ ಭೀಮ ತನ್ನಯ ಪರಮ ಸುಕೃತೋದಯವಲಾ ನೀನೊಬ್ಬನೆಂದೆನುತ – ಪದ್ಯ ೭೩
  • ಕುಸುಮಶರ ಯಮನಹನು ಅಮೃತವೆ ವಿಷವಹುದು ಕೇಳಾಲಿಕಲುಗಳು ಬಿಸಿಯಹವು ಬಾಂಧವರು ವೈರಿಗಳಹರು ನಿಮಿಷದಲಿ – ಪದ್ಯ ೭೫
  • ಮನೋಜನಂಬಿನಹಿಳುಕ ಮುರಿ ಡಿಂಗರಿಗಳನಹೆನೆಂದ – ಪದ್ಯ ೭೬
  • ನೆರೆದುದಾಯುಷ ನಿನಗೆ – ಪದ್ಯ ೭೭
  • ಅಬುಜಬಾಂಧವನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ – ಪದ್ಯ ೭೮
  • ಕಗ್ಗತ್ತಲೆಯ ಹಬ್ಬುಗೆಯೊಳಗೆ ಕಂಗಳ ಬೆಳಗು ಬಟ್ಟೆಯ ತೋರೆ – ಪದ್ಯ ೭೮
  • ಉದ್ದಾಮನೆದ್ದನು ಫಳಿಯನುಟ್ಟನು ಮಲ್ಲಗಂಟನಲಿ – ಪದ್ಯ ೭೯
  • ಕರಾಳಮತಿ ಸುಡುಗಾಡಲೈ ತಂದಾಲಯವ ಹೊಕ್ಕನು ಕೃತಾಂತನ ಬಾಯ ಹೊಗುವಂತೆ – ಪದ್ಯ ೮೨
  • ಎನ್ನವೊಲನಿಮಿಷರೊಳಾರುಂಟು ಚೆಲುವರು ಮನುಜರೆನ್ನನು ಹೋಲುವರೆ – ಪದ್ಯ ೮೩
  • ಪರಸತಿಗಳುಪಿದಾತಂಗಮೃತ ವಿಷ ಕೋಮಲತೆ ಕರ್ಕಶವಹುದು – ಪದ್ಯ ೮೭
  • ಸವಡಿ ಮಂದರದಂತೆ ಕೀಚಕ ಪವನಸುತರೊಪ್ಪಿದರು – ಪದ್ಯ ೮೯
  • ಬರಸಿಡಿಲು ಪರ್ವತದ ಶಿಖರವನೆರಗುವಂತಿರೆ – ಪದ್ಯ ೯೦
  • ಕೆರಳಿ ಕರಿ ಕೇಸರಿಯ ಹೊಯ್ದರೆ ತಿರುಗುವಂತಿರೆ – ಪದ್ಯ ೯೧
  • ಖಳನು ಕಾಲನ ಕೋಣ ತುಳಿದಂತಿಳೆಯೊಳೊರಗಿರೆ – ಪದ್ಯ ೯೩
  • ಸೂರ್ಯನಡರಿದನುದಯಪರ್ವತವ – ಪದ್ಯ ೧೦೫

ನಿಮ್ಮ ಟಿಪ್ಪಣಿ ಬರೆಯಿರಿ