ನುಡಿಮುತ್ತುಗಳು: ವಿರಾಟ ಪರ್ವ ೧ಸಂಧಿ

  • ಅಡವಿಯೇ ಸಾಮ್ರಾಜ್ಯ ನಿಮ್ಮಡಿಯೊಡನಿರಲು ನೀವಿಲ್ಲದಾ ಪುರವಡವಿ – ಪದ್ಯ ೯
  • ಸುರಮುನಿಮೌಳಿ ಮಂಡಿತ ಚರಣೆ ಖಳದನುಜಾಳಿ ಮರ್ದಿನಿ ಘನ ಕಪರ್ದಿ ವರಾರ್ಧತನುಯುತಳೆ – ಪದ್ಯ ೧೨
  • ಉದಿತ ತೇಜಃಪುಂಜದಲಿ ಸೊಂಪೊದವಿ ಬರಲು – ಪದ್ಯ ೧೭
  • ಓಲಗಕೆ ಬಂದಖಿಳರಾಯರ ಮೌಳಿ ಮೌಕ್ತಿಕ ಮಣಿ ಮಯೂಖ ನಿವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ – ಪದ್ಯ ೨೦
  • ಕಾಲವಾವನನಾವಪರಿಯಲಿ ಕೀಳು ಮಾಡದು – ಪದ್ಯ ೨೦
  • ತರಣಿಗಂಜಿದಡಿಂದು ತಲೆಗಾಯ್ದಿರಿಸಿದನೊ; ಹಿರಿದು ಸೈರಿಸಲಾರೆನೆಂದೊಡ ನಿರಿಸಿದನೊ ಕೈರವವ – ಪದ್ಯ ೨೪
  • ತೆಳುವಸುರು ತಲೆದೋರೆ ತೋರಿದುದಲಗು ಮರುಮೊನೆಯೆನುತ ವಿಟರಳವಳಿಯೆ – ಪದ್ಯ ೨೫
  • ಮದನನಗಜವು ತೊತ್ತಳದುಳಿದುದೋ ಕಾಮುಕರನೆ – ಪದ್ಯ ೨೬
  • ಜನರ ಜಾಣಕ್ಕಾಡಲಾ ಮೋಹನ ಮಹಾಂಬುಧಿಯೊಳಗೆ – ಪದ್ಯ ೨೭
  • ಸರಸಿಜಾಯತದಂದವನು ಮೋಹರಿಸಿ ಮುಂಚುವ ಪರಿಮಳವನಂದರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ – ಪದ್ಯ ೨೮

ನಿಮ್ಮ ಟಿಪ್ಪಣಿ ಬರೆಯಿರಿ